Archive for the ‘Kannada’ Category

Most Recent

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಎಲ್ಲ ಜಲಾಶಯಗಳು ಪೂರ್ಣ ಭರ್ತಿಯಾಗಲುವವರೆಗೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಅಟ್ಟಹಾಸಗೈಯುತ್ತಿರುವ ತಾಲಿಬಾನ್ ಉಗ್ರರ ವಿರುದ್ಧ ಕಿಡಿಕಾರಿರುವ ಅಧ್ಯಕ್ಷ ಹಮೀದ್ ಕರ್ಜಾಯ್, ಪಾಕಿಸ್ತಾನದಲ್ಲಿರುವ ತಾಲಿಬಾನ್ ನೆಲೆಗಳ ಮೇಲೆ ಮೈತ್ರಿ ವಿದೇಶಿ ರಾಷ್ಟ್ರಗಳು ಯಾಕೆ ದಾಳಿ ನಡೆಸುತ್ತಿಲ್ಲ ಎಂದು ಪ್ರಶಿಸಿದ್ದು, ಅದಕ್ಕೆ ಇಚ್ಛಾಶಕ್ತಿ ಬೇಕಾಗಿದೆ ಎಂದು ತಿಳಿಸಿದ್ದಾರೆ.

ವಾಷಿಂಗ್ಟನ್: 2025ರ ಹೊತ್ತಿಗೆ ವಿಶ್ವದ ಜನಸಂಖ್ಯೆ 800 ಕೋಟಿಯನ್ನು ತಲುಪಲಿದೆ ಮತ್ತು ನಂತರದ 40 ವರ್ಷಗಳಲ್ಲಿ ಇದು 940 ಕೋಟಿಯನ್ನು ಮುಟ್ಟಲಿದೆ. 2050ಕ್ಕಾಗುವಾಗ ಭಾರತದ ಜನಸಂಖ್ಯೆ 170 ಕೋಟಿಯನ್ನು ತಲುಪಲಿದೆ ಎಂದು ಅಮೆರಿಕಾದ ತಜ್ಞರು ಹೇಳಿದ್ದಾರೆ.

ಲಂಡನ್: ಅಮೆರಿಕಾದ ಬಹಿರಂಗಗೊಂಡ ಮಿಲಿಟರಿ ದಾಖಲೆಗಳ ಮೂಲ ಯಾವುದೆಂದು ತಮಗೆ ತಿಳಿದಿಲ್ಲ ಎಂದಿರುವ ‘ವೀಕಿಲೀಕ್ಸ್’ ಸಂಪಾದಕರು, ದಾಖಲೆಗಳನ್ನು ಸ್ವೀಕರಿಸುವಾಗ ಮೂಲ ಬಯಲಾಗದಂತೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಅಫಘಾನಿಸ್ತಾನಕ್ಕೆ ಸಂಬಂಧಪಟ್ಟ ಯುದ್ಧ ದಾಖಲೆಗಳನ್ನು ಬಹಿರಂಗಪಡಿಸಿರುವುದು ಯಾರು ಅಥವಾ ಸಂಸ್ಥೆಗೆ ಇದರ ಬಗ್ಗೆ ಖಚಿತತೆ ಇಲ್ಲವೋ ಎಂಬುದರ ಬಗ್ಗೆ ನನಗೇನೂ ತಿಳಿದಿಲ್ಲ ಎಂದು ಸಂಪಾದಕ ಜೂಲಿಯನ್ ಅಸಾಂಜ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ:ರಾಜ್ಯದ ಎಲ್ಲ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಮಾಂಸಾಹಾರ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಮ್ತಾಜ್ ಅಲಿಖಾನ್ ಹೇಳಿದರು.

ತುಮಕೂರು: ಕಾಂಗ್ರೆಸ್ ಪಾದಯಾತ್ರೆ ಹಾಗೂ ಪಕ್ಷವನ್ನು ಟೀಕಿಸಿರುವ ರೆಡ್ಡಿ ಸಹೋದರರ ವಿರುದ್ಧ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದು, ರಾಜಕಾರಣದಲ್ಲಿ ಶ್ರೀರಾಮುಲು ಬಚ್ಚಾ. ದುಡ್ಡು ಮಾಡಲಿಕ್ಕಾಗಿ ರಾಜಕಾಣರಕ್ಕೆ ಬಂದ ರೆಡ್ಡಿಗಳು ನಮಗೆ ಬುದ್ದಿ ಹೇಳುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾವಲ್ಪಿಂಡಿ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮತ್ತು ತಾಲಿಬಾನ್ ಭಯೋತ್ಪಾದಕರ ನಡುವೆ ಸಂಬಂಧವಿದೆ ಹಾಗೂ ಭಾರತೀಯರನ್ನು ಕೊಂದು ಹಾಕಲು ತಾನು ಆದೇಶ ನೀಡಿದ್ದೆ ಎಂಬ ಬಹಿರಂಗಗೊಂಡಿರುವ ಅಮೆರಿಕಾ ಮಿಲಿಟರಿ ದಾಖಲೆಗಳು ಕೇವಲ ಕಾಲ್ಪನಿಕ ಎಂದು ಐಎಸ್ಐ ಮಾಜಿ ಮುಖ್ಯಸ್ಥ ಜನರಲ್ ಹಮೀದ್ ಗುಲ್ ಬಣ್ಣಿಸಿದ್ದಾರೆ.

ವಾಷಿಂಗ್ಟನ್: ತಾಲಿಬಾನ್ ಉಗ್ರಗಾಮಿ ಸಂಘಟನೆ ಮತ್ತು ಪಾಕಿಸ್ತಾನ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್(ಐಎಸ್ಐ) ನಡುವಿನ ಸಂಬಂಧದ ಬಗ್ಗೆ ಅಚ್ಚರಿ ಪಡುವಂತಾದ್ದು ಏನೂ ಇಲ್ಲ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಜೇಮ್ಸ್ ಮಾಟ್ಟಿಸ್ ಅಭಿಪ್ರಾಯವ್ಯಕ್ತಪಡಿಸಿದ್ದು, ಈ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿರುವುದಾಗಿದೆ ಎಂದರು.

ಕೊಲಂಬೊ: ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅದ್ಭುತ ದ್ವಿಶತಕ ಬಾರಿಸಿರುವ ಸಿಡಿಲಮರಿ ಸಚಿನ್ ತೆಂಡೂಲ್ಕರ್ ಐದನೇ ಬಾರಿ ಈ ಸಾಧನೆ ಮಾಡಿದ್ದಾರೆ. ಆ ಮೂಲಕ ‘ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಸಾಧನೆಯನ್ನು ಸರಿಗಟ್ಟಿದ್ದಾರೆ

ಲಾಸ್‌ ಏಂಜಲೀಸ್: ಎಟಿಪಿ ಫಾರ್ಮರ್ಸ್ ಕ್ಲ್ಯಾಸಿಕ್ ಓಪನ್ ಟೆನಿಸ್ ಚಾಂಪಿಯನ್‍ಶಿಪ್ ಪಂದ್ಯಾವಳಿಯ ಎರಡನೇ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಸೋಮದೇವ್ ದೇವವರ್ಮನ್, ತಮ್ಮ ಸೆರ್ಬಿಯಾದ ಎದುರಾಳಿ ಜಂಕೊ ಟಿಪ್ಸಾವೆರಿಕ್ ವಿರುದ್ಧ ಸೋಲನುಭವಿಸಿ ನಿರ್ಗಮಿಸಿದ್ದಾರೆ.

 Page 1 of 1,307  1  2  3  4  5 » ...  Last » 
© Wroon. 2009 |